Sunday, 3 July 2022

Post office new scheme



 
ಅಂಚೆ ಕಛೇರಿಯಲ್ಲಿ ಮತ್ತೊಂದು ಅದ್ಭುತ ಯೋಜನೆ, ತಿಂಗಳಿಗೆ 1500 ಹೂಡಿಕೆ-31 ಲಕ್ಷ ಆದಾಯ .

ಇದರ ಅಡಿಯಲ್ಲಿ, ತಿಂಗಳಿಗೆ ರೂ.1,500 ಠೇವಣಿ ಮಾಡುವ ಹೂಡಿಕೆದಾರರು ರೂ. 31 ರಿಂದ 35 ಲಕ್ಷ ರೂ.ವರೆಗೆ ರಿಟರ್ನ್ ಪಡೆಯಬಹುದು. ಇಂಡಿಯಾ ಪೋಸ್ಟ್ ನೀಡುವ ಈ ರಕ್ಷಣಾ ಯೋಜನೆಯು ಕಡಿಮೆ ಅಪಾಯದೊಂದಿಗೆ ಉತ್ತಮ ಆದಾಯವನ್ನು ನೀಡುತ್ತದೆ. ಸಂಪೂರ್ಣ ವಿವರಗಳಿಗೆ ಹೋಗುವುದಾದರೆ.. 
19 ವರ್ಷ ಮೇಲ್ಪಟ್ಟ ಅಭ್ಯರ್ಥಿಗಳು ಗ್ರಾಮ ಸುರಕ್ಷಾ ಯೋಜನೆಯ ಭಾಗವಾಗಿ ಇದಕ್ಕೆ ಅರ್ಹರಾಗಿರುತ್ತಾರೆ. ಈ ಯೋಜನೆಗೆ ಗರಿಷ್ಠ ಅರ್ಹತೆಯ ವಯಸ್ಸು 55 ವರ್ಷಗಳು
ಈ ಯೋಜನೆಯಡಿಯಲ್ಲಿ ಕನಿಷ್ಠ ವಿಮಾ ಮೊತ್ತವು ರೂ.10,000 ರಿಂದ ರೂ.10 ಲಕ್ಷಗಳವರೆಗೆ ಇರುತ್ತದೆ. ಈ ಯೋಜನೆಯ ಪ್ರೀಮಿಯಂ ಅನ್ನು ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕವಾಗಿ ಪಾವತಿಸಬಹುದು.
ಇದರ ಅಡಿಯಲ್ಲಿ, ತಿಂಗಳಿಗೆ ರೂ.1,500 ಠೇವಣಿ ಮಾಡುವ ಹೂಡಿಕೆದಾರರು ರೂ. 31 ರಿಂದ 35 ಲಕ್ಷ ರೂ.ವರೆಗೆ ರಿಟರ್ನ್ ಪಡೆಯಬಹುದು. ಇಂಡಿಯಾ ಪೋಸ್ಟ್ ನೀಡುವ ಈ ರಕ್ಷಣಾ ಯೋಜನೆಯು ಕಡಿಮೆ ಅಪಾಯದೊಂದಿಗೆ ಉತ್ತಮ ಆದಾಯವನ್ನು ನೀಡುತ್ತದೆ. ಸಂಪೂರ್ಣ ವಿವರಗಳಿಗೆ ಹೋಗುವುದಾದರೆ.. 

ಗ್ರಾಹಕರು ಪ್ರೀಮಿಯಂ ಪಾವತಿಸಲು 30 ದಿನಗಳ ಗ್ರೇಸ್ ಅವಧಿಯನ್ನು ಹೊಂದಿದ್ದಾರೆ. ಪಾಲಿಸಿ ಅವಧಿಯಲ್ಲಿ ಡೀಫಾಲ್ಟ್ ಆಗಿದ್ದಲ್ಲಿ.. ಪಾಲಿಸಿದಾರರು ಬಾಕಿ ಇರುವ ಪ್ರೀಮಿಯಂ ಪಾವತಿಸಿ ವಿಮೆಯನ್ನು ನವೀಕರಿಸಬಹುದು.

ಈ ಯೋಜನೆಯ ಮೂಲಕ ಸಾಲ ಸೌಲಭ್ಯವೂ ದೊರೆಯುತ್ತದೆ. ಕ್ಲೈಂಟ್ ಮೂರು ವರ್ಷಗಳ ನಂತರ ಪಾಲಿಸಿಯನ್ನು ಸರೆಂಡರ್ ಮಾಡಲು ಆಯ್ಕೆ ಮಾಡಬಹುದು. ಆದರೆ, ಆ ಸಂದರ್ಭದಲ್ಲಿ ಯಾವುದೇ ಗ್ರಾಮ ಭದ್ರತಾ ಯೋಜನೆ ವ್ಯಾಪ್ತಿಗೆ ಬರಲಿಲ್ಲ.

ವ್ಯಕ್ತಿಯು 19 ನೇ ವಯಸ್ಸಿನಲ್ಲಿ ಗ್ರಾಮ ಸುರಕ್ಷಾ ಪಾಲಿಸಿಯಲ್ಲಿ 10 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ, ಮಾಸಿಕ ಪ್ರೀಮಿಯಂ 55 ವರ್ಷಕ್ಕೆ 1,515 ರೂ., 58 ವರ್ಷಕ್ಕೆ 1,463 ಮತ್ತು 60 ವರ್ಷಕ್ಕೆ 1,411 ರೂ. 55 ವರ್ಷಗಳ ವಿಮೆಗೆ ಮೆಚ್ಯೂರಿಟಿ ಲಾಭ ರೂ. 31.60 ಲಕ್ಷಗಳು, 58 ವರ್ಷಗಳ ಪಾಲಿಸಿಗೆ ರೂ. 33.40 ಲಕ್ಷ. 60 ವರ್ಷಗಳ ಮೆಚುರಿಟಿ ಲಾಭ ರೂ.34.60 ಲಕ್ಷಗಳಾಗಿರುತ್ತದೆ.

Saturday, 2 July 2022

ಶೇಂಗಾ ಮತ್ತು ಬೆಲ್ಲ ಸೇವನೆಯಿಂದಾಗುವ ಅದ್ಭುತ ಪ್ರಯೋಜನಗಳು

ಆರೋಗ್ಯಕರ ಆಹಾರಾಭ್ಯಾಸ ದೇಹವನ್ನು ಫಿಟ್‌ ಆಗಿ ಇರಿಸಿಕೊಳ್ಳಲು ಸಹಾಯಕ. ಅದಕ್ಕೆ ಪ್ರತಿದಿನ ಒಂದು ಹಿಡಿ ಶೇಂಗಾ ಮತ್ತು ಒಂದು ಚಮಚ ಬೆಲ್ಲವನ್ನು ಸೇವನೆ ಮಾಡಿ. ಅದರ ಉಪಯೋಗಗಳೇನು ಎನ್ನುವ ಮಾಹಿತಿ ಇಲ್ಲಿದೆ ನೋಡಿ.

ಆರೋಗ್ಯಕ್ಕೆ ಆರೋಗ್ಯವೇ ಮೂಲ. ನಮ್ಮ ಆಹಾರ ಸೇವನೆಯ ಅಭ್ಯಾಸ ನಮ್ಮ ಆರೋಗ್ಯವನ್ನು ನಿರ್ಧಾರ ಮಾಡುತ್ತದೆ. ಆಹಾರ ಸೇವನೆ ಕೇವಲ ಹೊಟ್ಟೆ ತುಂಬಲು ಎನ್ನುವ ಕಾರಣಕ್ಕೆ ಎನ್ನುವ ಬದಲು ಒಂದಷ್ಟು ಆಹಾರದಲ್ಲಿ ವಿಭಿನ್ನ ಸಂಯೋಜನೆಗಳನ್ನು ಮಾಡಿಕೊಳ್ಳುವ ಮೂಲಕ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಪಡೆಯಬಹುದಾಗಿದೆ.


ಆಹಾರ ಸಂಯೋಜನೆಯಲ್ಲಿ ಶೆಂಗಾ ಮತ್ತು ಬೆಲ್ಲ ಅತ್ಯುತ್ತಮ ಸಂಯೋಜನೆಯಾಗಿದೆ. ಪ್ರತಿದಿನ ಒಂದು ಮುಷ್ಟಿ ಶೇಂಗಾ ಹಾಗೂ ಎರಡು ಚಮಚ ಬೆಲ್ಲವನ್ನು ಸೇವನೆ ಮಾಡುತ್ತಾ ಬಂದರೆ ಆರೋಗ್ಯದಲ್ಲಿ ದೊಡ್ಟ ಮಟ್ಟದ ಬದಲಾವಣೆಯನ್ನು ಕಾಣಬಹುದಾಗಿದೆ. ಶೇಂಗಾ ಮತ್ತು ಬೆಲ್ಲ ಸೇರಿದ ಚಿಕ್ಕಿ ಅಥವಾ ಹಲ್ವಾ ರೀತಿಯ ಸಿಹಿ ತಿಂಡಿ ಎಲ್ಲರಿಗೂ ಗೊತ್ತು ಅದೇ ರೀತಿ ಶೇಂಗಾವನ್ನು ನೆನೆಸಿಟ್ಟು ನಂತರ ಅದನ್ನು ಬೆಲ್ಲದೊಂದಿಗೆ ತಿಂದರೆ ಆರೋಗ್ಯಕ್ಕೆ ಇನ್ನಷ್ಟು ಲಾಭಗಳನ್ನು ಪಡೆಯಬಹುದಾಗಿದೆ.

 ​ರಕ್ತದ ಉತ್ಪಾದನೆಗೆ ಸಹಕಾರಿ


ಶೇಂಗಾ ಮತ್ತು ಬೆಲ್ಲದ ಸೇವನೆಯಿಂದ ದೇಹದಲ್ಲಿ ರಕ್ತದ ಉತ್ಪಾದನೆ ಹೆಚ್ಚಾಗುತ್ತದೆ. ಇದು ಹೆಣ್ಣು ಮಕ್ಕಳಿಗೆ ಹೆಚ್ಚು ಒಳ್ಳೆಯದು. ಮುಟ್ಟಿನ ದಿನಗಳಲ್ಲಿ ಉಂಟಾಗುವ ನೋವನ್ನು ಕಡಿಮೆ ಮಾಡಲು ಕೂಡ ಈ ಶೇಂಗಾ ಮತ್ತು ಬೆಲ್ಲ ಸಹಾಯಕವಾಗಿದೆ.

ಅಲ್ಲದೆ ಪ್ರತೀ ತಿಂಗಳು ನಷ್ಟವಾಗುವ ರಕ್ತವನ್ನು ಮತ್ತೆ ಪಡೆಯಬಹುದಾಗಿದೆ. ಹೀಗಾಗಿ ಶೇಂಗಾ ಮತ್ತು ಬೆಲ್ಲವನ್ನು ಪ್ರತಿನಿತ್ಯ ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಿ. ಇದು ಪುರುಷರಲ್ಲೂ ಶಕ್ತಿಯನ್ನು ಹೆಚ್ಚಿಸಲು ಸಹಾಯಕವಾಗಿದೆ

ಮೂಳೆಗಳ   ಆರೋಗ್ಯಕ್ಕೆ       ಒಳ್ಳೆಯದು


ವಯಸ್ಸಾದಂತೆ ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣ ಕಡಿಮೆಯಾಗುತ್ತದೆ. ಹೀಗಾಗಿ ಬೆಲ್ಲ ಮತ್ತು ಶೇಂಗಾ ಉತ್ತಮ ಆಹಾರವಾಗಲಿದೆ. ಇನ್ನು ಬೆಳೆಯುವ ಮಕ್ಕಳಲ್ಲಿ ಕೂಡ ಕ್ಯಾಲ್ಸಿಯಂ ಅಂಶ ಹೆಚ್ಚಾಗಿ ಬೇಕಾಗುತ್ತದೆ. ಈ ಕಾರಣದಿಂದ ಚಿಕ್ಕ ಮಕ್ಕಳಿಗೂ ಕೂಡ ಶೇಂಗಾ ಮತ್ತು ಬೆಲ್ಲವನ್ನು ತಿನ್ನಲು ನೀಡಬೇಕು ಎಂದು ಹೇಳುವುದು.

ರುಚಿಯಲ್ಲಿಯೂ ಉತ್ತಮವಾಗಿರುವ ಈ ಸ್ನ್ಯಾಕ್ಸ್‌ ಮಕ್ಕಳ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇನ್ನು ವಯಸ್ಸಾದಂತೆ ಕೂಡ ಮೂಳೆಗಳ ಸವೆತವಾಗುತ್ತದೆ. ಇದನ್ನು ತಡೆಯಲು ಶೇಂಗಾ ಮತ್ತು ಬೆಲ್ಲ ಸಹಾಯಕವಾಗಿದೆ.

ಕೊಲೆಸ್ಟ್ರಾಲ್ ಪ್ರಮಾಣವು ಕಡಲೆಕಾಯಿ ಬೆಲ್ಲದಲ್ಲಿ ಅತಿ ಕಡಿಮೆ ಇರುತ್ತದೆ. ಕಡಲೆಕಾಯಿಯಲ್ಲಿ ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳ ಉಪಸ್ಥಿತಿಯು ಪಾರ್ಶ್ವವಾಯುಗಳ ಜೊತೆಗೆ ಪರಿಧಮನಿಯ ಮತ್ತು ಅಪಧಮನಿಯ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ. ಹೃದ್ರೋಗಗಳನ್ನು ತಡೆಯಲು ಮತ್ತು ನಿಮ್ಮ ಹೃದಯದ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

 ಬೆಲ್ಲ ಮತ್ತು ಶೇಂಗಾ ಸೇವನೆ ಮಾಡುವುದರಿಂದ


ರಕ್ತದ ಉತ್ಪಾದನೆ ಹೆಚ್ಚಾಗುತ್ತದೆ. ಇದರಿಂದ ಗರ್ಭಿಣಿಯ ಆರೋಗ್ಯ ಉತ್ತಮವಾಗಿರುತ್ತದೆ. ಇದು ಮಗುವಿನ ಬೆಳವಣಿಗೆಯ ಧನಾತ್ಮಕ ಪರಿಣಾಮ ಬೀರುತ್ತದೆ.

ಬೆಲ್ಲ ಮತ್ತು ಶೇಂಗಾ ಸೇವೆನೆಯಿಂದ ಮಕ್ಕಳಲ್ಲಿ ಅಸ್ತಮಾ ಸಮಸ್ಯೆ ಕಾಣಿಸಿಕೊಳ್ಳುವುದು ಕಡಿಮೆಯಾಗುತ್ತದೆ. ಇದರಲ್ಲಿ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದೆ, ಪ್ರೋಟೀನ್ ಭ್ರೂಣದ ಬೆಳವಣಿಗೆಗೆ ಸಹ ಅಗತ್ಯವಾಗಿದೆ. ಆರೋಗ್ಯಕರ ಭ್ರೂಣದ ಬೆಳವಣಿಗೆಗೆ ಕಾರಣವಾಗುವ ಹೆಚ್ಚಿನ ಅಂಶಗಳೆಂದರೆ ಕಡಲೆಕಾಯಿ ಮತ್ತು ಬೆಲ್ಲ ಎರಡೂ ರಕ್ತ ಪರಿಚಲನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.


​ದೇಹದ ತೂಕ ಇಳಿಕೆಗೆ ಸಹಕಾರಿ


ಶೇಂಗಾ ಮತ್ತು ಬೆಲ್ಲ ಸ್ನಾಯುವಿನ ಬೆಳವಣಿಗೆಗೆ ಅಗತ್ಯವಾದ ಉತ್ತಮ ಪ್ರಮಾಣದ ಪ್ರೋಟೀನ್ ಅನ್ನು ಹೊಂದಿರುತ್ತದೆ, ಇದು ಆರೋಗ್ಯಕರ ಕೊಬ್ಬನ್ನು ಸಹ ಒಳಗೊಂಡಿರುತ್ತದೆ, ಅದು ಹಸಿವನ್ನು ನಿಯಂತ್ರಿಸುತ್ತದೆ.

ದೇಹದಲ್ಲಿ ಅನಗತ್ಯ ಕೊಬ್ಬು ಶೇಖರಣೆಯಾಗದಂತೆ ತಡೆಯುತ್ತದೆ. ಆದ್ದರಿಂದ ತೂಕ ಇಳಿಕೆಗೂ ಕೂಡ ಶೇಂಗಾ ಮತ್ತು ಬೆಲ್ಲ ಸಹಾಯಕವಾಗಿದೆ.



    



 


ತಾಜಾ ಹಸಿರು ಬಟಾಣೆ ತಿನ್ನುವುದರಿಂದಾಗುವ ಪ್ರಯೋಜನಗಳು :             

ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಈ ಬಟಾಣಿ ಅಂದ್ರೆ ಬಲು ಅಚ್ಚು ಮೆಚ್ಚು. ಸ್ವಲ್ಪ ದುಬಾರಿ ಅಂತಾ ಮೂಗು ಮುರಿದುಕೊಂಡು ಹೋದ್ರೆ ಆರೋಗ್ಯ ಸಂಪತ್ತಿನ ತರಕಾರಿಯಿಂದ ವಂಚಿತರಾಗೋದು ಮಾತ್ರ ಫಿಕ್ಸ್‌..

ಕಣ್ಣುಗಳ ಆರೋಗ್ಯ ಕಾಪಾಡುತ್ತದೆ

ವಯಸ್ಸಾದಂತೆ ಎದುರಾಗುವ ಕಣ್ಣಿನ ಪೊರೆ ಸಮಸ್ಯೆ ಕೆಲವರನ್ನ ನಾನಾ ಸಂಕಷ್ಟಗಳಿಗೆ ಗುರಿ ಮಾಡುತ್ತದೆ. ಇನ್ನು ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಹಾಗೂ ವಯಸ್ಕರಿಗೆ ಕಣ್ಣಿಗೆ ಸಂಬಂಧ ಪಟ್ಟ ಹಲವಾರು ಸಮಸ್ಯೆಗಳು ಎದುರಾಗುತ್ತವೆ.

ಲ್ಯೂಟೀನ್ ಅಂಶ ಹಸಿ ಬಟಾಣಿ ಕಾಳುಗಳಲ್ಲಿ ಸಾಕಷ್ಟು ಇದೆ ಎಂದು ಹೇಳುತ್ತಾರೆ. ಇದರ ನಿರಂತರ ಸೇವನೆಯಿಂದ ದೂರದೃಷ್ಟಿ ಅಥವಾ ಹತ್ತಿರದ ದೃಷ್ಟಿ ಸಮಸ್ಯೆಯನ್ನು ಕೂಡ ಇದು ಪರಿಹಾರ ಮಾಡುವಲ್ಲಿ ಕಾರ್ಯ ನಿರ್ವಹಿಸುತ್ತದೆ.

ಹೃದಯವನ್ನು ಕಾಯಿಲೆಗಳಿಂದ ರಕ್ಷಿಸುತ್ತದೆ   

ಹಸಿ ಬಟಾಣಿಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ವಿಶೇಷವಾಗಿ ರಕ್ತನಾಳಗಳನ್ನು ಬಲಗೊಳಿಸಿ ಇದರಿಂದ ಹೃದಯದ ಮೇಲೆ ಬೀಳುವ ಭಾರವನ್ನು ಕಡಿಮೆಗೊಳಿಸುತ್ತವೆ.

ಜೊತೆಗೆ ಹೃದಯದ ಕ್ಷಮತೆಯನ್ನು ಹೆಚ್ಚಿಸುತ್ತವೆ. ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸಲು ನೆರವಾಗುತ್ತವೆ.

Post office new scheme

  ಅಂಚೆ ಕಛೇರಿಯಲ್ಲಿ ಮತ್ತೊಂದು ಅದ್ಭುತ ಯೋಜನೆ, ತಿಂಗಳಿಗೆ 1500 ಹೂಡಿಕೆ-31 ಲಕ್ಷ ಆದಾಯ . ಇದರ ಅಡಿಯಲ್ಲಿ, ತಿಂಗಳಿಗೆ ರೂ.1,500 ಠೇವಣಿ ಮಾಡುವ ಹೂಡಿಕೆದಾರರು ರೂ. 31 ...