ತಾಜಾ ಹಸಿರು ಬಟಾಣೆ ತಿನ್ನುವುದರಿಂದಾಗುವ ಪ್ರಯೋಜನಗಳು :
ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಈ ಬಟಾಣಿ ಅಂದ್ರೆ ಬಲು ಅಚ್ಚು ಮೆಚ್ಚು. ಸ್ವಲ್ಪ ದುಬಾರಿ ಅಂತಾ ಮೂಗು ಮುರಿದುಕೊಂಡು ಹೋದ್ರೆ ಆರೋಗ್ಯ ಸಂಪತ್ತಿನ ತರಕಾರಿಯಿಂದ ವಂಚಿತರಾಗೋದು ಮಾತ್ರ ಫಿಕ್ಸ್..
ಕಣ್ಣುಗಳ ಆರೋಗ್ಯ ಕಾಪಾಡುತ್ತದೆ
ವಯಸ್ಸಾದಂತೆ ಎದುರಾಗುವ ಕಣ್ಣಿನ ಪೊರೆ ಸಮಸ್ಯೆ ಕೆಲವರನ್ನ ನಾನಾ ಸಂಕಷ್ಟಗಳಿಗೆ ಗುರಿ ಮಾಡುತ್ತದೆ. ಇನ್ನು ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಹಾಗೂ ವಯಸ್ಕರಿಗೆ ಕಣ್ಣಿಗೆ ಸಂಬಂಧ ಪಟ್ಟ ಹಲವಾರು ಸಮಸ್ಯೆಗಳು ಎದುರಾಗುತ್ತವೆ.
ಲ್ಯೂಟೀನ್ ಅಂಶ ಹಸಿ ಬಟಾಣಿ ಕಾಳುಗಳಲ್ಲಿ ಸಾಕಷ್ಟು ಇದೆ ಎಂದು ಹೇಳುತ್ತಾರೆ. ಇದರ ನಿರಂತರ ಸೇವನೆಯಿಂದ ದೂರದೃಷ್ಟಿ ಅಥವಾ ಹತ್ತಿರದ ದೃಷ್ಟಿ ಸಮಸ್ಯೆಯನ್ನು ಕೂಡ ಇದು ಪರಿಹಾರ ಮಾಡುವಲ್ಲಿ ಕಾರ್ಯ ನಿರ್ವಹಿಸುತ್ತದೆ.
ಹೃದಯವನ್ನು ಕಾಯಿಲೆಗಳಿಂದ ರಕ್ಷಿಸುತ್ತದೆ
ಹಸಿ ಬಟಾಣಿಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ವಿಶೇಷವಾಗಿ ರಕ್ತನಾಳಗಳನ್ನು ಬಲಗೊಳಿಸಿ ಇದರಿಂದ ಹೃದಯದ ಮೇಲೆ ಬೀಳುವ ಭಾರವನ್ನು ಕಡಿಮೆಗೊಳಿಸುತ್ತವೆ.
ಜೊತೆಗೆ ಹೃದಯದ ಕ್ಷಮತೆಯನ್ನು ಹೆಚ್ಚಿಸುತ್ತವೆ. ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸಲು ನೆರವಾಗುತ್ತವೆ.